HD Kumaraswamy makes serious allegations in Deepak Rao's murder, alleges BJP corporator involved in the murder Kumaraswamy said in Mysuru today.
ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹತ್ಯೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, "ದಿಲೀಪ್ ರಾವ್ ಹತ್ಯೆ ಪ್ರಕರಣದಲ್ಲಿ ನಾಲ್ವರನ್ನ ಬಂಧಿಸಲಾಗಿದೆ. ಆ ನಾಲ್ವರಿಗೆ ಸುಪಾರಿ ಕೊಟ್ಟವರು ಯಾರೂ ಎಂಬುದನ್ನ ಸರ್ಕಾರಕ್ಕೆ ಪತ್ತೆ ಮಾಡಲು ಆಗಿಲ್ಲವೇ? ಮಾಹಿತಿ ಪ್ರಕಾರ, ಒಬ್ಬ ಸ್ಥಳೀಯ ಕಾರ್ಪೊರೇಟರ್ ಕೈವಾಡವಿದೆ" ಎಂದು ಹೇಳಿದರು.ದಿಲೀಪ್ ರಾವ್ ಹತ್ಯೆಗೆ ಬಿಜೆಪಿ ನಾಯಕರೇ ಕಾರಣ ಎಂಬ ಮಾಹಿತಿ ಇದೆ. ಸತ್ಯ ಹೊರಗಡೆ ಇಡಲು ಈ ಸರ್ಕಾರಕ್ಕೆ ಏನು ಕಷ್ಟ? ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದಾರಾ? ದಿಲೀಪ್ ರಾವ್ ತಾಯಿಯ ಗೋಳು ಇವರಿಗೆ ಅರ್ಥವಾಗುತ್ತಿದ್ದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಕರಣ ತನಿಖೆ ಮಾಹಿತಿಯನ್ನ ನಾನು ಪಡೆದೆ ಮಾತನಾಡುತ್ತಿದ್ದೇನೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದಾರೆ. ಆದರೂ ಸರ್ಕಾರ ಮೌನ ವಹಿಸಿ ಕುಳಿತಿದೆ. ನಾವು ಉರಿಯುವ ಮನೆಗೆ ತುಪ್ಪ ಸುರಿಯುವುದಿಲ್ಲ.